top of page

ಕೊಡಗು

ಕೊಡಗು ಜಿಲ್ಲೆ, ಕರ್ನಾಟಕ ರಾಜ್ಯ ದ ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಹಸಿರು ವನರಾಜಿಯಿಂದ, ತೊರೆ, ಝರಿ, ನದಿಗಳಿಂದ ಕೂಡಿದ ಪರಿಸರದಲ್ಲಿದೆ. ಅದರ ಬಗ್ಗೆ ಹಲವಾರು ಕನ್ನಡ ಕವಿಗಳು ವರ್ಣಿಸಿದ್ದಾರೆ........

ಹೆಸರಿನ ನಿಷ್ಪತ್ತಿ

ಕೊಡಗಿಗೆ ಕೂರ್ಗ್ (Coorg) ಎಂಬ ಆಂಗ್ಲೀಯ ಬಳಕೆಯೂ ಇದೆ. ಭಾರತದ 'ಸ್ಕಾಟ್ ಲ್ಯಾಂಡ್' ಎಂಬ ಹೆಸರೂ ಇದಕ್ಕಿದೆ. 'ಕೊಡಗು' - ಕನ್ನಡದ ಕುಡು, ಎಂದರೆ ಗುಡ್ಡ ಅಥವಾ ಬೆಟ್ಟದ ಪ್ರದೇಶ ಎಂಬುದರಿಂದ ಬಂದಿರಬಹುದೆಂದು ಭಾವಿಸಲಾಗಿದೆ.........

ಇಲ್ಲಿಯ ಜನ

ಕೊಡವರು ಇಲ್ಲಿಯ ಮುಖ್ಯ ಜನರು. ಕೊಡವ ತಕ್ಕ್, ಅರೆಭಾಷೆ ಕೊಡಗಿನಲ್ಲಿ ಪ್ರಮುಖವಾಗಿ ಬಳಸಲಾಗುವ ಭಾಷೆ. ಕನ್ನಡ ಆಡಳಿತ ಭಾಷೆ. ಇದಲ್ಲದೆ ಮಲಯಾಳಂ,ತಮಿಳು, ಅರೆಗನ್ನಡ, ತುಳು,ರಾವುಲ, ಮುಂತಾದವನ್ನು ಆಡುವವರು ಇಲ್ಲಿರುವರು. ಕೊಡವ ಭಾಷೆ ಅಥವಾ ಕೊಡವ ತಕ್ಕ್‌ಗೆ ಲಿಪಿಯಿಲ್ಲ, ಇದನ್ನು ಸುಮಾರು ೫೦೦,೦೦೦ ಜನರು ಮಾತನಾಡಲು ಬಳಸುತ್ತಾರೆ. ಯೆರವರು (ಅಥವಾ ರಾವುಲರು), ಕೊಡಗಿನಲ್ಲಿ ಹಾಗೂ ಕೇರಳದಲ್ಲಿ (ಇಲ್ಲಿ ಅಡಿಯರು ಎಂದು ಕರೆಯಲ್ಪಡುತ್ತಾರೆ) ಇದ್ದಾರೆ. ಇವರು ಪ್ರಮುಖವಾಗಿ ಹಿಂದೂಗಳು ಹಾಗೂ ವ್ಯವಸಾಯಗಾರರು..........


ಭೂಗೋಳ

ಕೊಡಗು ತನ್ನ ಪಶ್ಚಿಮ ಸರಹದ್ದಿನಲ್ಲಿ ದಕ್ಷಿಣ ಕನ್ನಡದ ಜಿಲ್ಲೆಯನ್ನೂ, ಉತ್ತರಕ್ಕೆ ಹಾಸನ, ಪೂರ್ವಕ್ಕೆ ಮೈಸೂರು, ದಕ್ಷಿಣಕ್ಕೆ ಕೇರಳದ ಕಣ್ಣೂರು ಜಿಲ್ಲೆಗಳನ್ನೂ ಹೊಂದಿದೆ. ಈ ಜಿಲ್ಲೆಯ ರಾಜಧಾನಿ ಮಡಿಕೇರಿ (ಮರ್ಕೆರಾ ಎಂದೂ ಆಂಗ್ಲದಲ್ಲಿ ಕರೆಯಲಾಗುತ್ತದೆ). ಕೊಡಗು ಮೊದಲು ಬ್ರಿಟಿಷರ ಕಾಲದಲ್ಲಿ ಸ್ವತಂತ್ರ ರಾಜ್ಯವಾಗಿತ್ತು. ಸ್ವಾತಂತ್ರ್ಯಾನಂತರ ಭಾಷಾವಾರು ರಾಜ್ಯವಿಂಗಡನೆಯಾದಾಗ ಮೈಸೂರು ರಾಜ್ಯಕ್ಕೆ ಜಿಲ್ಲೆಯಾಗಿ ಸೇರಲ್ಪಟ್ಟಿತು.

ತಾಲೂಕುಗಳು

ಕೊಡಗಿನಲ್ಲಿ 2 ತಾಲೂಕುಗಳಿವೆ.

  1. ಮಡಿಕೇರಿ

  2. ವಿರಾಜಪೇಟೆ

ಮಡಿಕೇರಿ ತಾಲುಕಿನ ಪ್ರೇಕ್ಷಣೀಯ ಸ್ಥಳಗಳು

ಪ್ರೇಕ್ಷಣೀಯ ಸ್ಥಳಗಳಲ್ಲಿ ಮುಖ್ಯವಾಗಿ ಮಡಿಕೇರಿ ತಾಲುಕಿನಲ್ಲಿ

  1. ಅಬ್ಬಿ ಜಲಪಾತ,

  2. ಓಂಕಾರೇಶ್ವರ ದೇವಸ್ಥಾನ,

  3. ಗದ್ದಿಗೆ,

  4. ಅರಮನೆ,

  5. ರಾಜಸೀಟ್,

  6. ತಲಕಾವೇರಿ, ಇತ್ಯಾದಿಗಳಾದರೆ,

ವಿರಾಜಪೇಟೆ ತಾಲುಕಿನ ಪ್ರೇಕ್ಷಣೀಯ ಸ್ಥಳಗಳು

ವಿರಾಜಪೇಟೆ ತಾಲುಕಿನಲ್ಲಿ-

  1. ನಾಗರಹೊಳೆ ,

  2. ಇರ್ಪು,

  3. ಕುಂದ,

  4. ಟೀ ಏಸ್ಟೇಟ್,

  5. ಸೈಂಟ್ ಏನ್ಸ್ ಚರ್ಚ್,

  6. ಇಗ್ಗುತ್ತಪ್ಪ ದೇವಸ್ಥಾನ,

  7. ನಾಲ್ಕುನಾಡು ಅರಮನೆ, ಮುಂತಾದವು ಇವೆ.

ಸೋಮವಾರಪೇಟೆಯ ಪ್ರೇಕ್ಷಣೀಯ ಸ್ಥಳಗಳು
  1. ಕಾವೇರಿ ನಿಸರ್ಗಧಾಮ,

  2. ಕೊಪ್ಪದ ಗೊಲ್ಡನ್ ದೇವಸ್ಥಾನ,

  3. ವೀರಭೂಮಿ,

  4. ದುಬಾರೆ ಅರಣ್ಯ,

  5. ಹಾರಂಗಿ ಜಲಾಶಯ,

  6. ಚಿಕ್ಲಿ ಹೊಳೆ,

  7. ಹೊನ್ನಮ್ಮನ ಕೆರೆ,

  8. ಮಲ್ಲಳ್ಳಿ ಜಲಪಾತ, ಮೊದಲಾದವಿವೆ.

ಬೆಳೆಗಳು

ಈ ಜಿಲ್ಲೆಯಲ್ಲಿ ಕಾಫಿ ಬಹಳವಾಗಿ ಬೆಳೆಯಲಾಗುತ್ತದೆಯಲ್ಲದೆ ಕರಿ ಮೆಣಸು,ಏಲಕ್ಕಿ,ಕಿತ್ತಳೆ,ಮತ್ತು ಭತ್ತ ಪ್ರಮುಖ ಬೇಸಾಯ.ಒಂದು ಕಾಲದಲ್ಲಿ ಕೊಡಗಿನ ಕಿತ್ತಳೆ ಭಾರತದಲ್ಲೆ ಹೆಸರಾಗಿತ್ತು.ಅದರೆ ಇಂದು ಅದು ಕೊಡಗಿನಲ್ಲಿಯೆ ಅಪರೂಪವಾಗಿದೆ.ಮೊದಲು ಕೊಡಗಿನಿಂದ ಕರ್ನಾಟಕ ರಾಜ್ಯಕ್ಕೆ ೧/೩ ಪಾಲು ಆದಾಯ ತೆರಿಗೆಯಾಗಿ ಹೋಗುತ್ತಿತ್ತು.......

Pls like our facebook page ................... #kodagu_the_heaven_on_earth

source : wikipedia


Featured Posts
Recent Posts
Archive
Search By Tags
No tags yet.
Follow Us
  • Facebook Basic Square
  • Twitter Basic Square
  • Google+ Basic Square
bottom of page